ಕೈಲಾಗದೋನು
ಮೈ ಪರಚಿಕೊಂಡ ಅಂತ ಒಂದ್ ಗಾದೆ
ಇದೆ.
ಬಹಶಃ
ಈ ವಿಷ್ಯಕ್ಕೂ ಈ ಗಾದೆಗೂ ಏನೂ
ಸಂಬಂಧವಿಲ್ದೇ ಇರಬೋದು.
ಆದ್ರೆ
ಸಮೀಪದ ಸಂಬಂಧ ಅಂತೂ ಇದೆ.
ಇಷ್ಟು
ದಿನ ಕೇಂದ್ರದಲ್ಲಿ ಅಥವಾ ರಾಜ್ಯಗಳಲ್ಲೇ
ಆಗ್ಲಿ ಅಧಿಕಾರದ ಚುಕ್ಕಾಣಿ
ಹಿಡಿಯೋಕೆ ‘ಜನಪ್ರತಿನಿಧಿ'ಗಳು
ಅಂತ ಅನಿಸಿಕೊಂಡವರು /
ಅನಿಸಿಕೊಳ್ಳುವವರು
ಜನರಿಗೆ ವುಲನ್ ಟೋಪಿ ಹಾಕ್ತಾ
ಇದ್ರು.
ಆದ್ರೆ
ಅದ್ಯಾವ ಘಳಿಗೇಲಿ ‘ನಮ್ಮ'
ಮೋದಿ
ಸಾಹೇಬ್ರು ಅಖಾಡಕ್ಕೆ ಬಂದ್ರೋ,
ನೋಡಿ
ಖದರೇಽ ಬೇರಾಯ್ತು.
ಮಕಮಲ್
ಟೋಪಿ ಹಾಕೋಕ್ ಶುರು ಮಾಡಿದ್ರು.
ಜನ್ರಿಗೂ
ವುಲನ್ ಟೋಪಿ ಹಾಕ್ಕಂಡೂ ಹಾಕ್ಕಂಡೂ
ಬೇಜಾರಾಗಿತ್ತು.
ಅವ್ರು
ವುಲನ್ನಿಂದ ಮಕಮಲ್ಗೆ ಶಿಫ್ಟ್.
ಇಲ್ಲಿ
ನನಗೆ ಮೋದಿ ಅಂದ್ರೆ ದ್ವೇಷ ಏನೂ
ಇಲ್ಲ.
ಇಲ್ಲಿವರ್ಗೂ
ಎಲ್ಲಾ ರಾಜಕಾರಣಿಗಳು ಮಾಡ್ತಾ
ಇದ್ದಿದ್ನೇ ಇವ್ರೂ ಮಾಡಿದಾರೆ
ಅಷ್ಟೇ.
ಆದ್ರೆ
ಸ್ವಲ್ಪ ಕಲರ್ಫುಲ್ ಆಗಿ ಮಾಡಿದಾರೆ.
ಇದ್ರಲ್ಲಿ
ತಮ್ಮ ಚಾಣಾಕ್ಷತೆ ಮೆರೆದಿದಾರೆ.
ಇಲ್ಲಿ
ನಿಜವಾಗ್ಲೂ ಮಂಕೆಗಳಾಗಿದ್ದು
ಮಾತ್ರ ಜನ್ರೇ.
ಪದೇ
ಪದೇ ರಾಜಕಾರಣಿಗಳ ಪೊಳ್ಳು
ಭರವೆಸೆಗಳನ್ನ ಕೇಳ್ತಾ ಇರ್ತೀವಿ.
ಅವು
ಈಡೇರಲ್ಲ ಅನ್ನೋದು ನಮ್ಗೆ ಗೊತ್ತೂ
ಇರತ್ತೆ.
ಆದ್ರೂ
ನಾವು ಈ ಭರವಸೆಗಳ ಬುನಾದಿ ಮೇಲೆಯೇ
ಬದುಕೋಕೆ ಆಸೆ ಪಡ್ತೀವಿ.
ಹಿಂದಿನವ್ರು
ಕೊಟ್ಟ ಭರವಸೆಗಳೆಲ್ಲಾ ಈಡೇರಿದೋ
ಅಷ್ಟ್ರಲ್ಲೇ ಇದೆ.
ಆದ್ರೂ
2014ರ
ಲೋಕಸಭೆ ಚುನಾವಣೆ ಟೈಮ್ನಲ್ಲಿ
ಮೋದಿ ಅತೀ ಹೆಚ್ಚು ಹೇಳಿದ್ದು
ಕಪ್ಪು ಹಣದ ಬಗ್ಗೆ.
ವಿದೇಶದಲ್ಲಿರೋ
ಕಪ್ಪು ಹಣನಾ ಅಧಿಕಾರಕ್ಕೆ ಬಂದ್ರೆ
100
ದಿನದಲ್ಲಿ
ವಾಪಸ್ ತರ್ತೀನಿ ಅಂತ ಹೇಳಿದ್ರು.
ಅಲ್ಲ...
ಭರವಸೆ
ಕೊಟ್ರು.
ತಾಂತ್ರಿಕವಾಗಿ
ಅದು ಸಾಧ್ಯ ಇಲ್ಲ ಅನ್ನೋದು ಮೋದಿ
ಭಾಷಣ ಕೇಳಿದ ಮತ್ತು ಕೇಳದವರಿಗೂ
ಗೊತ್ತಿರೋ ವಿಷ್ಯವೇ.
ಆದ್ರೂ
‘ಅದನ್ನ ನಾವೆಲ್ಲಾ ನಂಬಿದ್ವಿ'.
ಈಗ
ಮೋದಿ ಸರ್ಕಾರ ಅಸ್ತಿತ್ವಕ್ಕೆ
ಬಂದು 100
ದಿನ
ಕಳೆದಾಯ್ತು.
ಆದ್ರೆ
ಇನ್ನೂ ವಿದೇಶದಲ್ಲಿರೋ ಕಪ್ಪು
ಹಣ ಮಾತ್ರ ಭಾರತಕ್ಕೆ ಬಂದಿಲ್ಲ.
ಬಹುಶಃ
ಇನ್ನೂ ಹಲವು ತಿಂಗಳು ಅಥವಾ ಹಲವು
ವರ್ಷಗಳಾದ್ರೂ ಆ ಬ್ಲಾಕ್ ಮನಿ
ವಾಪಸ್ ಬರುತ್ತೆ ಅನ್ನೋ ನಂಬಿಕೆನೂ
ಇಲ್ಲ.
ಆದ್ರೂ
ಕೆಲವರು ಇನ್ನೂ ಅದೇ ಹಳೇ ಗುಂಗಿನಲ್ಲೇ
ಇದ್ದಾರೆ.
ತಡವಾದ್ರೂ
ನಮ್ಮ ಮೋದಿ ಕಪ್ಪು ಹಣವನ್ನ ಭಾರತಕ್ಕೆ
ತಂದೇ ತರ್ತಾರೆ ಅಂತ ನಂಬಿದ್ದಾರೆ.
ಇನ್ನು
ಕೆಲವರು ಇದು ಸಾಧ್ಯವೇ ಇಲ್ಲ ಅಂತಲೂ
ವಾದ ಮಾಡ್ತಾ ಇದ್ದಾರೆ.
ಯಾವ್ದು
ಏನೇ ಆದ್ರೂ,
ಮೋದಿ
ಮಾತ್ರ ತಮ್ಮ ಅದೇ ಲಹರಿಯಲ್ಲಿ
ಜೋರು ಭಾಷಣಗಳಲ್ಲಿ,
ಹಲವು
ರಾಜ್ಯಗಳ ವಿಧಾನಸಭೆ ಚುನಾವಣಾ
ಪ್ರಚಾರಗಳಲ್ಲಿ ಬ್ಯುಸಿ...
ಬ್ಯುಸಿ...
ಬ್ಯುಸಿ...
ಅಂದ್ಹಾಗೆ...
ನೋಡ
ನೋಡ್ತಿದ್ದಂತೆ,
ಕೇಂದ್ರದಲ್ಲಿ
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ
ಬಂದು ಒಂದು ವರ್ಷ ಕಳೀಯೋಕೆ ಸ್ವಲ್ಪವೇ
ಸಮಯ ಉಳಿದಿದೆ.
ಇನ್ನು
ಹಾಗೇ,
ಬಯ್ಯುತ್ತಾ,
ಅವ್ರನ್ನ
ಇವ್ರು,
ಇವ್ರನ್ನ
ಅವ್ರು ಟೀಕಿಸ್ತಾ ಅದ್ಹೇಗೋ
ಕಣ್ಮುಚ್ಚಿ ತೆಗಿಯೋದ್ರೊಳಗೆ 5
ವರ್ಷನೂ
ಪೂರ್ಣಗೊಳಿಸೇ ಬಿಡ್ತಾರೆ.
ಆದ್ರೆ
ಚುನಾವಣೆಯ ಪ್ರಚಾರದ ವೇಳೆ ನೀಡಿದ
ಅದಷ್ಟೋ ಭರವಸೆಗಳು ಇನ್ನೂ ಹಾಗೇ
ಇರ್ತವೆ.
ಆಗ
ಮತ್ತೆ ಇವ್ರುಗಳೇ ನಮ್ಮ ಮುಂದೆ
ಪ್ರತ್ಯಕ್ಷರಾಗ್ತಾರೆ.
ಆಗ ನಮ್ಮ
ಮತ್ತೆ ಮೋದಿ ಆಥವಾ ಮೋದಿಯಂಥವರು,
ರಾಹುಲ್
ಗಾಂಧಿ,
ಸೋನಿಯಾ
ಗಾಂಧಿ ಇನ್ನು ಹಲವು ಘಟಾನುಘಟಿ
ನಾಯಕರು ಮತ್ತೆ ಪ್ರತ್ಯಕ್ಷವಾಗ್ತಾರೆ.
ಅದೇ
ಭರವಸೆಗಳು,
ಆಶ್ವಾಸನೆಗಳು,
ಕೆಲವರು
ವುಲನ್ ಟೋಪಿ,
ಹಲವರು
ಮಕಮಲ್ ಟೋಪಿ.
ಬದಲಾವಣೆಯನ್ನು ಬಯಸುವ ನಮ್ಮ
ಬುದ್ಧಿವಂತ ಮತದಾರ ತಾನು ಮಾತ್ರ ಬದಲಾಗದೇ ಮತ್ತೆ ಮತ್ತೆ ತನ್ನ ತಲೆ ಹೊಸ ಟೋಪಿಗಾಗಿ ಸಿದ್ಧಪಡಿಸ್ಕಂಡೇ ಇರ್ತಾನೆ...
ನವೀ...
No comments:
Post a Comment