Sunday, November 24, 2013

ಅವಧಿಯಲ್ಲಿ ನನ್ನ ಮತ್ತು ಸ್ನೇಹಿತೆ ಮಂಜುಳಳ ಢುಂಢಿ ಕುರಿತ ಅಭಿಪ್ರಾಯ 5sep-13 ರಂದು ಪ್ರಕಟಗೊಂಡಿತ್ತು...

‘ಢುಂಢಿ’ ವಿವಾದ: ಇಬ್ಬರು ವಿದ್ಯಾರ್ಥಿಗಳು ಕಂಡಂತೆ

September 5, 2013
by G
ಢುಂಢಿ ವಿವಾದಾತ್ಮಕ ಕೃತಿಯಾಗಬೇಕಿರಲಿಲ್ಲ
ಮಂಜುಳ ಹುಲಿಕುಂಟೆ
ಬದುಕು ಕಮ್ಯುನಿಟಿ ಕಾಲೇಜ್
ಯೋಗೇಶ್ ಮಾಸ್ಟರ್ ರವರ ‘ಢುಂಢಿ’ ಕೃತಿಯು ಒಂದು ವೈಚಾರಿಕ ಕೃತಿಯಾಗಿದ್ದು ಮಿಶ್ರ ಪ್ರತಿಕ್ರಿಯೆಗಳಿಗೆ ಆಸ್ಪದ ಮಾಡಿಕೊಟ್ಟಿರುವುದು ಪ್ರಜ್ಞಾವಂತರು ಗಮನಿಸಬೇಕಾದ ಅಂಶವಾಗಿದೆ. ಪ್ರಾಚೀನ ಹಿಂದೂ ಧರ್ಮ ಗ್ರಂಥಗಳಲ್ಲಿ ದೇವರಾಗಿ ಪ್ರಥಮ ಪೂಜೆ ಪಡೆಯುತ್ತಿರುವ ಗಣಪತಿಯ ಹುಟ್ಟಿನ ಬಗ್ಗೆ ಅನೇಕರಿಗೆ ಇರುವ ಅನುಮಾನ ಇಂದು ನೆನ್ನೆಯದಲ್ಲ. ಗಣಪತಿ ಎಂದರೆ ಒಂದು ಗುಂಪಿನ ನಾಯಕ ಆತ ಒಬ್ಬ ಕಾಡುಮಾನವ(ಡ್ರಾವಿಡ ವ್ಯಕ್ತಿ) ಆತನಿಂದ ದೇವಾನುದೇವತೆಯರ ಕೆಲವು ಕೆಲಸಗಳಿಗೆ ವಿಘ್ನಬರುತ್ತಿದ್ದರಿಂದ ಆತನಿಗೆ ಈ ದೈವತ್ವದ ಆಮಿಷ ಒಡ್ಡಿ ಆತನನ್ನು ಗಣಪತಿಯಾಗಿಸಿ ತಮ್ಮ ಕಾರ್ಯದಲ್ಲಿ ಯಶಸ್ವಿಯಾದರು ಎಂಬುದನ್ನು. ಅನೇಕ ಬಾರಿ ಇಂತಹ ವಾದವನ್ನು ನಾನು ಕೇಳಿದ್ದೇನೆ.
ಹಾಗೆ ನೋಡಿದರೆ ಸಿದ್ದಲಿಂಗಯ್ಯ ಕಂಬಾಳುರವರ ‘ಮೈಥಿಲಿ’ ಕೂಡ ಇಂತಹದ್ದೇ ಒಂದು ವೈಚಾರಿಕ ಕೃತಿ ಇಂತಹ ಅನೇಕ ಕೃತಿಗಳು ಈಗಾಗಲೇ ಬಂದಿವೆ. ಅಂತಹದ್ದರಲ್ಲಿ ‘ಢುಂಡಿ’ ಕೃತಿಯನ್ನು ಸರಿಯಾಗಿ ಅಥರ್ೈಸಿಕೋಳ್ಳುವ ಮೋದಲೇ ಯೋಗೇಶ್ ಮಾಸ್ಟರ್ ರವರನ್ನು ಬಂಧಿಸಿದ್ದು ಸರಿಯಲ್ಲ. ಇಂತಹ ವರ್ತನೆಗಳಿಂದ ವೈಚಾರಿಕ ಮನಸ್ಸುಗಳಿಗೆ ಘಾಸಿಮಾಡುವ ಮೂದಲು ಕೃತಿಯ ಸಮಗ್ರ ಅಧ್ಯನಮಾಡಿ ಕ್ರಮ ಕೈ ಗೊಳ್ಳಬೇಕಿತ್ತು.ಇಂಥಹ ಅವಗಢಗಳ ಕುರಿತು ಪ್ರಜ್ಞಾವಂತರು ಇನ್ನಾದರೂ ಚಿಂತಿಸುವಂತಾಗಲಿ.
 

ಢುಂಢಿ ವಿಚಾರ… ವಿವಾದ…!
ಕೆ ನವೀನ್ ಕಮಾರ್
ಬದುಕು ಕಮ್ಯೂನಿಟಿ ಕಾಲೇಜು

ಭಾರತದ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯಗಳನ್ನು, ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಅಥವ ಹೇಳುವ ಹಕ್ಕನ್ನು ಸಂವಿಧಾನ ನೀಡಿದೆ. ಆದರೆ ಅವರ ಯಾವ ಅನಿಸಿಕೆ ಅಭಿಪ್ರಾಯಗಳೇ ಆಗಲಿ ಅದು ಅವರ ವೈಯಕ್ತಿಕವಾಗಿರುತ್ತದೆ ಮತ್ತು ಅದನ್ನು ಅವರು ಯಾರ ಮೇಲೂ ಬಲವಂತವಾಗಿ ಹೇರುವ ಹಾಗಿಲ್ಲ.
ಒಬ್ಬ ಸಾಮಾನ್ಯ ವ್ಯಕ್ತಿಯು ತನ್ನ ಅಭಿಪ್ರಾಯಗಳನ್ನು ತನ್ನ ಸ್ನೇಹಿತರ ಬಳಗದೊಂದಿಗೆ ಹಂಚಿಕೊಳ್ಳಬಹುದು ಹಾಗೆಯೇ ಒಬ್ಬ ಕಥೆಗಾರ ತನ್ನ ಕಥೆಗಳ ಮೂಲಕ ಮತ್ತು ಕವಿಗಳು ತಮ್ಮ ಕವಿತೆಯ ಮೂಲಕ ತಮ್ಮ ವಿಚಾರಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುತ್ತಾರೆ. ಅವರ ಅಭಿಪ್ರಾಯಗಳನ್ನು ಒಪ್ಪುವುದು ಬಿಡುವುದು ಅದನ್ನು ಕೇಳುವವರ, ಓದುವವರ ವಿವೇಚನೆಗೆ ಬಿಟ್ಟದ್ದು. ಯಾರ ಮೇಲೂ ಯಾರೂ ತಮ್ಮ ವಿಚಾರಗಳನ್ನು ಬಲವಂತಾಗಿ ಹೇರುವುದಿಲ್ಲ. ಹಾಗೆಯೇ ಇಂತಹ ವಿಚಾರಗಳನ್ನು ಪಡೆದುಕೊಳ್ಳುವವರು ಸಹ ಪ್ರತಿಕ್ರಯೆಗಳನ್ನು ನೀಡಬಹುದೇ ವಿನಹ ಯಾರ ಅಭಿವ್ಯಕ್ತಿ ಸ್ವಾತಂತ್ರಯವನ್ನೂ ಕಸಿದುಕೊಳ್ಳುವ ಹಕ್ಕು ಅವರಿಗಿರುವುದಿಲ್ಲ.
ಆದರೆ ಇತ್ತೀಚಿಗೆ ಢುಂಢಿ ಕಾದಂಬರಿ ಕುರಿತಂತೆ ಆಗುತ್ತಿರುವುದೇ ಬೇರೆ. ಢುಂಢಿಯ ಕಾದಂಬರಿಕಾರ ಯೋಗೇಶ್ ಮಾಸ್ಟರ್ ತಮ್ಮ ಕಾದಂಬರಿಯಲ್ಲಿ ಹಿಂದುಗಳ ನಂಬಿಕೆಗೆ ಚ್ಯುತಿ ತಂದಿದ್ದಾರೆ, ಅವರು ಹಿಂದು ದೇವತೆ ಶ್ರೀ ಗಣೇಶನನ್ನು ಕ್ರೂರಿ, ರಕ್ಕಸ ಎಂಬಂತೆಲ್ಲಾ ಚಿತ್ರಿಸಿದ್ದಾರೆ ಎಂದು ಹಲವು ಪ್ರತಿಭಟನೆಗಳನ್ನು ಮತ್ತು ಅವರ ವಿರುದ್ಧ ವಾಕ್ಸಮರವನ್ನು ಅನೇಕ ಹಿಂದು ಧರ್ಮ ಸಂಘಟನೆಗಳು ನಡೆಸಿದವು. ಇಲ್ಲಿಯವರೆಗೂ ಎಲ್ಲವೂ ಸರಿ ಇತ್ತೆಂದೇ ಹೇಳಬಹುದು. ಹೇಗೆ ಯೋಗೇಶ್ ಮಾಸ್ಟರ್ಗೆ ತಮ್ಮ ವಿಚಾರಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆಯೋ ಹಾಗೆಯೇ ಇತರರಿಗೂ ಅವರ ಅಭಿಪ್ರಾಯಗಳನ್ನು ತಿಳಿಯಪಡಿಸುವ ಸಾಂವಿಧಾನಿಕ ಹಕ್ಕಿದೆ.
ಆದರೆ ನಿಜವಾದ ಎಡವಟ್ಟು ಆಗಿದ್ದು ಕಾದಂಬರಿಕಾರ ಯೋಗೇಶ್ ಮಾಸ್ಟರ್ ಬಂಧನವಾದಾಗ. ಯಾವ ಸ್ವಾತಂತ್ರ್ಯವನ್ನು ಸಂವಿಧಾನ ನಮಗೆ ಕೊಟ್ಟಿದೆಯೋ ಅದನ್ನು ನಮ್ಮ ಸಕರ್ಾರಗಳು ಕೇವಲ ಕೆಲವು ಹಿತಾಸಕ್ತಿಗಳನ್ನು ಓಲೈಸಿಕೊಳ್ಳಲು ಅಥವಾ ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳಲು ಕಸಿದುಕೊಳ್ಳುವುದು ಎಷ್ಟು ಸೂಕ್ತ? ಇಲ್ಲಿ ಯೋಗೇಶ್ ಮಾಸ್ಟರ್ರವರು ಏನನ್ನು ಹೇಳಿದ್ದಾರೆ ಅಥವಾ ಅವರು ಹೇಳಿರುವುದು ಯಾವ ಆಧಾರದ ಮೇಲೆ? ಎಂದು ತಿಳಿದುಕೊಂಡು ಮುಂದುವರಿದಿದ್ದರೆ ಬಹುಶ: ಇಂದು ಅವರ ಬಂಧನ ಇಷ್ಟು ದೊಡ್ಡಮಟ್ಟದ ವಿವಾದವಾಗುತ್ತಿರಲಿಲ್ಲ ಅನಿಸುತ್ತದೆ. ಒಂದೊಮ್ಮೆ ಅವರು ಇಲ್ಲಿ ಗಣೇಶನನ್ನು ಕೆಟ್ಟದಾಗಿ ಅಥವ ದುಷ್ಟ, ಕ್ರೂರಿ ಎಂದು ಚಿತ್ರಿಸಿದ್ದಾರೆಂದೇ ಅಂದುಕೊಂಡರೂ ಅದಕ್ಕೆ ಅವರು ಆಧಾರವಾಗಿಟ್ಟುಕೊಂಡು ಅಧ್ಯಯನ ನಡೆಸಿದ ಕೃತಿಗಳೂ ಪ್ರಭಾವ ಬೀರಿರುತ್ತವೆ. ಅಂದರೆ ಆ ಕೃತಿಗಳನ್ನೋ ಅಥವ ಕಾದಂಬರಿಯನ್ನೋ ಬೇರೆ ಇನ್ನೊಬ್ಬ ವ್ಯಕ್ತಿಯು ಬರೆದಿರುತ್ತಾನೆ. ಅಂದ ಮೇಲೆ ಅವನ ವಿರುದ್ಧ ನಡೆಯದ ಹೋರಾಟಗಳು, ಅವನ ವಿರುದ್ಧ ನಡೆಯದ ಟೀಕೆಗಳು ಕೇವಲ ಯೋಗೇಶ್ ಮಾಸ್ಟರ್ರವರ ವಿರುದ್ಧ ಮಾತ್ರ ಏಕೆ ನಡೆಯಬೇಕು?
ಯೋಗೇಶ್ರವರು ತಾವು ಕಂಡಂತೆ ಅಥವಾ ತಾವು ತಿಳಿದಂತೆ ಸಂದರ್ಭಕ್ಕನುಸಾರವಾಗಿ ಓದುಗನಿಗೆ ವ್ಯಕ್ತಿ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಅದು ಒಪ್ಪುವುದು ಬಿಡುವುದು ಓದುಗನಿಗೆ ಬಿಟ್ಟದ್ದು. ಆದ್ದರಿಂದ ಕೇವಲ ತಮ್ಮ ರಾಜಕೀಯ ದಾಳಗಳನ್ನು ಉಳಿಸಿಕೊಳ್ಳಲು ಮತ್ತು ಬಿಟ್ಟಿ ಪ್ರಚಾರಕ್ಕಾಗಿ ತಮ್ಮ ಅಭಿಪ್ರಾಯಗಳನ್ನು ಬಲವಂತವಾಗಿ ಎಲ್ಲರ ಮೇಲೂ ಹೇರುವ ಹುಂಬತನವನ್ನು ಈ ಸೋಕಾಲ್ಡ್ ಸಂಘಟನೆಗಳು ಇಲ್ಲಿಗೇ ನಿಲ್ಲಿಸಿ, ನಿಜವಾದ ಸಮಾಜ ಸುಧಾರಣೆಯಲಿ ತೊಡಗಿಕೊಂಡರೆ ಎಲ್ಲ ಸಮುದಾಯ, ಸಮಾಜದವರಿಗೂ ಒಳಿತಾದೀತು.

No comments:

Post a Comment