ಬರೊಬ್ಬರಿ 3
ವರ್ಷಗಳ ನಂತ್ರ ಅವ್ನು
ಇಷ್ಟೊಂದು ಖುಷಿಯಾಗಿದ್ದ.
ಇವತ್ತು ಅವ್ನ 25ನೇ
ವರ್ಷದ ಹುಟ್ಟುಹಬ್ಬ. ಅದೂ
ಕೂಡ ಸ್ಕೂಲ್ ರೆಕಾರ್ಡ್ಗಳ ಪ್ರಕಾರ.
ಅನಾಥನಾಗಿ ಬೆಳೆದ ಅವ್ನಿಗೆ
ಅವ್ನು ಹುಟ್ಟಿದ ಡೇಟ್ ಕೂಡ
ಗೊತ್ತಿಲ್ಲ. ಆದ್ರೆ
ಶಾಲೆಗೆ ಸೇರೋವಾಗ ಅವ್ನಿದ್ದ
ಅನಾಥಶ್ರಮದ ವಾರ್ಡನ್ ಯಾವ್ದೋ
ಒಂದು ಡೇಟ್ ಬರ್ಸಿದ್ರು. ಅಷ್ಟೇ
ಅಲ್ಲ, ಅವ್ನಿಗೆ ಅಂತ
ಒಂದು ಹೆಸ್ರು ಸಿಕ್ಕಿದ್ದು ಸಹ
ಅವತ್ತೆ. ಅಲ್ಲಿವರ್ಗೂ
ಯಾರ್ ಏನ್ ಕರೆದ್ರೆ, ಅದೇ
ಅವ್ನ ಹೆಸ್ರು ಅನ್ನೋ ಹಾಗಾಗಿತ್ತು.
ಆದ್ರೆ ಸ್ಕೂಲ್ಗೆ ಜಾಯಿನ್
ಆದ ದಿನ ಅವ್ನಿಗೆ ಅಂತ ಒಂದು ಅಧಿಕೃತ
ದಾಖಲೆ ಸಿಕ್ತು. ಅವತ್ತಿಂದ
ತಾನೂ ಎಲ್ಲರಂತೆಯೇ ಅಂತ ಅವ್ನು
ಫೀಲ್ ಆಗೋಕೆ ಶುರು ಮಾಡ್ದ.
ಅದ್ಹೇಗೋ ಒಂದು ಡಿಗ್ರಿ
ಅಂತ ಮುಗಿಸ್ಕಂಡ. ಆದ್ರೆ
ಚಿಕ್ಕಂದಿನಿಂದ್ಲೂ ಸಿನಿಮಾ
ಅಂದ್ರೆ, ಅವ್ನಿಗೆ
ಅದೇನೋ ಅಟ್ರಾಕ್ಷನ್. ದೊಡ್ಡೋನಾದ್ಮೇಲೆ
ನಾನು ಸಿನಿಮಾ ಡೈರೆಕ್ಟ್ರೇ ಅಗೋದು
ಅಂತ ಅವ್ನು ಆಗ್ಲೇ ಡಿಸೈಡ್ ಮಾಡಿದ್ದ.
ಅದ್ಕೆ, ಡಿಗ್ರಿ
ಆಗ್ತಿದ್ದಂಗೆ ಯಾವ್ದೊ ಒಬ್ಬ
ಡೈರೆಕ್ಟ್ರ ಹತ್ರ ಹೋಗಿ ಅಸಿಸ್ಟೆಂಟ್
ಆಗಿ ಸೇರಿದ. ಅಲ್ಲಿಂದ
ಇಲ್ಲಿಗೆ 5 ವರ್ಷಗಳ
ಪಯಣ. ಇನ್ನೂ ತನಗೆ
ಡೈರೆಕ್ಟ್ರಾಗೋ ಪಕ್ವತೆ ಬಂದಿಲ್ಲ
ಅಂತಲೇ ಭಾವಿಸಿದ್ದಾನೆ. ಆದ್ಕೆ,
ತನ್ನದೇ ಚಿತ್ರವನ್ನ
ನಿರ್ದೇಶಿಸೋಕೆ ಹಿಂದೇಟು ಹಾಕ್ತಾ
ಇದಾನೆ. ಆದ್ರೆ,
ಅವ್ನಿಗೂ ಗೊತ್ತು ಇನ್ನು
ತನ್ನ ಬಳಿ ಹೆಚ್ಚಿನ ಸಮಯ ಇಲ್ಲ
ಅಂತ. ಯಾಕಂದ್ರೆ ಅವ್ನು
ಬದುಕಿರೋದು ಇನ್ನು ಬರೀ 2 ವರ್ಷ
ಮಾತ್ರ.
ಮೂರು ವರ್ಷದ
ಹಿಂದೆ, ಅದೊಂದ್ ದಿನ
ಬೆಳಗಿನಿಂದ ಯಾಕೋ ಮೈ ಹುಷಾರಿಲ್ಲ
ಅಂತ ಅನಿಸ್ತಾ ಇತ್ತು ಅವ್ನಿಗೆ.
ಆದ್ರೆ ಅದರ ಕಡೆ ಅಷ್ಟು
ಗಮನ ಕೊಟ್ಟಿರಲಿಲ್ಲ. ಕಳೆದ
5 ದಿನಗಳಿಂದ ಹಗಲು,
ರಾತ್ರಿ ಅನ್ನದೇ ಕಂಟಿನ್ಯೂ
ಆಗಿ ಶೂಟಿಂಗ್ ಮಾಡ್ತಾ ಇರೋದ್ರಿಂದ
ಸುಸ್ತಾಗಿರ್ಬೋದು ಅನ್ಕಂಡ.
ಆದ್ರೆ ಮಧ್ಯಾಹ್ನ
ಸೆಟ್ನಲ್ಲೇ ತಲೆ ಸುತ್ತಿ ಬಿದ್ದವನು,
ಎಚ್ಚೆತ್ತಿದ್ದು ಆಸ್ಪತ್ರೆ
ಬೆಡ್ ಮೇಲೆ. ಅವನನ್ನ
ಪರೀಕ್ಷಿಸಿದ ಡಾಕ್ಟ್ರು ಈಗ ರೆಸ್ಟ್
ಮಾಡಿ, ನಾಳೆ ನಿಮ್ಗೆ
ಒಂದಷ್ಟು ಟೆಸ್ಟ್ ಮಾಡ್ಸೋಕಿದೆ
ಅಂತ ಹೇಳಿ ಇವ್ನ ಮಾತಿಗೂ ಕಾಯ್ದೆ
ಹೊರಟು ಹೋಗಿದ್ರು. ಆ
ರಾತ್ರಿನಾ ಅವ್ನು ಅದ್ಹೇಗೆ
ಆಸ್ಪತ್ರೆಯಲ್ಲಿ ಕಳೆದ್ನೋ ಅವ್ನಿಗೇ
ಗೊತ್ತು. ಮರುದಿನ
ಬೆಳಗ್ಗೆನೇ ಆ ಟೆಸ್ಟು, ಈ
ಟೆಸ್ಟು ಅಂತ ಎಲ್ಲಾ ಮಾಡ್ಸಿದ್ದಾಯ್ತು.
ಅವತ್ತು ಅವನನ್ನ ಡಿಸ್ಚಾರ್ಜ್
ಮಾಡಿದ ಡಾಕ್ಟ್ರು, 2 ದಿನ
ಬಿಟ್ಟು ಬಂದು ರಿಪೋರ್ಟ್ ತಗೋಳೋಕೆ
ಹೇಳಿದ್ರು.
ಎರಡು ದಿನದ ನಂತ್ರ
ಆಸ್ಪತ್ರೆಗೆ ಹೋದವನನ್ನ ಡಾಕ್ಟರ್ನ
ಸಪ್ಪೆ ಮುಖ ಸ್ವಾಗತಿಸಿತು.
ಇವನನ್ನ ನೋಡ್ತಾ ಇದ್ದಂಗೆ
ಆ ಡಾಕ್ಟ್ರು, ನೋಡಿ
ಮಿಸ್ಟರ್ ನಿಮ್ಗೆ ಜೀವನದಲ್ಲಿ
ಏನಾದ್ರೂ ಆಸೆಗಳು ಅಂತ ಇದ್ರೆ
ಆದಷ್ಟು ಬೇಗ ತಿರಿಸ್ಕಂಡು ಬಿಡಿ
ಅಂತ ನಿರ್ಭಾವುಕವಾಗಿ ಹೇಳಿದ್ರು.
ಇವ್ನಿಗೆ ಏನೊಂದೂ ಆರ್ಥ
ಆಗ್ಲಿಲ್ಲ. ಯಾಕೆ ಅಂತ
ಕೇಳಿದ್ರೆ, ಅದ್ಯಾವುದೋ
ಒಂದು ರೋಗದ ಹೆಸ್ರು ಹೇಳಿದ್ರು.
ಅದೂ ಅರ್ಥ ಆಗ್ಲಿಲ್ಲ.
ಆಗ ಸಮಾಧಾನದಿಂದ ಆ ಡಕ್ಟ್ರು
ಹೇಳಿದ ಮಾತು ಕೇಳಿ, ಇವ್ನಿಗೆ
ಆಕಾಶನೇ ಕಳಚಿ ಬಿದ್ದಂತೆ ಆಗಿತ್ತು.
ಹೌದು ಮಿಸ್ಟರ್ ನಿಮಗೆ
ಬಂದಿರೋದು ಇನ್ನೂ ಚಿಕಿತ್ಸೆ
ಕಂಡುಹಿಡಿಯದ ರೋಗ. ನೀವು
ಹೆಚ್ಚೆಂದ್ರೆ ಇನ್ನು 5 ವರ್ಷ
ಬದುಕ್ತೀರಿ ಅಂತ ಆ ಡಾಕ್ಟ್ರು
ಹೇಳಿದ್ರು.
ಅಷ್ಟೇ ಅವತ್ತು
ಅವ್ನ ಜೀವನದಲ್ಲಿ ಮಾಯವಾದ ಖುಷಿ,
ಮತ್ತೆ ಹಿಂತಿರುಗೋಕೆ
ತೆಗೆದುಕೊಂಡಿದ್ದು, ಅವನ
ಜೀವನದ ಅತ್ಯಮೂಲ್ಯ 3 ವರ್ಷಗಳನ್ನ.
ಸದಾ ತಾನು ಸಾಯುತ್ತೇನೆ
ಅನ್ನೋ ಕೊರಗಿನಲ್ಲೇ ಇದ್ದ ಅವ್ನಿಗೆ
ಸ್ಪೂರ್ತಿಯಾಗಿದ್ದು ಅವ್ಳು.
ಆದ್ರೆ ಅವ್ಳಿಗೂ ಗೊತ್ತಿಲ್ಲ
ಇವ್ನು ಸಾಯ್ತಾನೆ ಅಂತ. ಆಕೆ,
ಇವ್ನು ಅಸಿಸ್ಟೆಂಟ್
ಆಗಿದ್ದ ಒಂದು ಚಿತ್ರದಲ್ಲಿ
ಸಹನಟಿಯಾಗಿ ಆಕ್ಟ್ ಮಾಡೋಕೆ
ಬಂದಿದ್ದಳು. ಆಗ
ಇವ್ರಿಬ್ಬರ ಪರಿಚಯವಾಗಿತ್ತು.
ನಂತರ ಆ ಪರಿಚಯ ಅದ್ಯಾವಾಗ
ಪ್ರೀತಿಗೆ ತಿರುಗಿತೋ, ಅವ್ನಿಗೂ
ಗೊತ್ತಿಲ್ಲ, ಅವ್ಳಿಗೂ
ತಿಳಿದಿಲ್ಲ. ಅವ್ರಿಬ್ರೂ
ಒಬ್ಬರನ್ನೊಬ್ರು ಜೀವಕ್ಕಿಂತ
ಹೆಚ್ಚಾಗಿ ಪ್ರೀತಿಸ್ತಾ ಇದ್ರೂ,
ಇಬ್ರೂ ಬಾಯ್ಬಿಟ್ಟು
ಹೇಳಿರಲಿಲ್ಲ. ಇವ್ನಿಗಂತೂ
ಈಗ ಹೇಳೋ ಅವಕಾಶ ಕೂಡ ಇರಲಿಲ್ಲ.
ತಾನು ಸಾಯೋದು ಖಚಿತ ಅಂತ
ಗೊತ್ತಾದ್ಮೇಲೆ, ತನ್ನ
ಪ್ರೀತಿಯನ್ನ ಅವಳ ಬಳಿ ಹೇಳಿ
ಅದ್ಯಾಕೆ ಆಕೆನೂ ಜೀವಂತವಾಗಿ
ಕೊಲ್ಲೋದು ಅಂತ ಸುಮ್ಮನಾಗಿದ್ದ.
ಆದಷ್ಟು ಅವಳನ್ನ ಅವೈಡ್
ಮಾಡೋಕೆ ಶುರು ಮಾಡ್ದ. ಆದ್ರೆ
ಅವ್ಳು ಮಾತ್ರ ಇವನನ್ನ ಬಿಡಲಿಲ್ಲ.
ಅದ್ರಲ್ಲೂ ಇವ್ನು
ಡೈರೆಕ್ಟರ್ ಆಗ್ಬೇಕು ಅಂತ ಅವ್ಳು
ಸಹ ಅದೆಷ್ಟೋ ಕನಸುಗಳನ್ನ
ಕಟ್ಟಿಕೊಂಡಿದ್ಳು. ಆದ್ರೆ
ಇವ್ನು ಬರಬರುತ್ತಾ ಡಲ್ ಆಗ್ತಾ
ಇದ್ದಿದ್ದನ್ನ ಗಮನಿಸಿ, ಮತ್ತೆ
ಅವ್ನ ಆಸೆಗೆ ನೀರೆರೆದು ಪೋಷಿಸೋಕೆ
ಶುರು ಮಾಡಿದ್ಳು. ಆ
ಆಸೆ ಈಡೇರಿದ್ದು ಕೂಡ ಅವನ ಸಾವಿನ
ಸುದ್ದಿ ತಿಳಿದ 3 ವರ್ಷಗಳ
ಬಳಿಕ.
ಇವತ್ತು ಅವ್ನ
ಹುಟ್ಟು ಹಬ್ಬ. ಅಷ್ಟೇ
ಅಲ್ಲ, ಅವ್ನ ನಿರ್ದೇಶನದ
ಮೊದಲ ಚಿತ್ರದ ಮುಹೂರ್ತ ಕೂಡ.
ಈ ಚಿತ್ರದ ಹಿರೋಯಿನ್
ಅವನು ತನ್ನ ಮನಸಲ್ಲೇ ಆರಾಧಿಸ್ತಾ
ಇರೋ ಅವ್ನ ದೇವತೆ. ತನ್ನ
ಮೊದಲ ಸಿನಿಮಾವನ್ನೇ ಡಿಫರೆಂಟ್
ಆಗಿ ಮಾಡ್ಬೇಕು ಅಂತ ಯೋಚಿಸಿದ್ದ.
ಅದಕ್ಕಾಗಿ ಸಾಕಷ್ಟು
ಶ್ರಮಪಟ್ಟು ಒಂದು ಒಳ್ಳೇ ಕಥೆಯನ್ನೂ
ಸಿದ್ಧಪಡಿಸಿಕೊಂಡಿದ್ದ. ಆದ್ರೆ
ಅದು ಹಿರೋಯಿನ್ ಓರಿಯೆಂಟ್ ಫಿಲ್ಮ್
ಅನ್ನೋ ಕಾರಣಕ್ಕೆ ಪ್ರೊಡ್ಯೂಸರ್ಗಳು
ಹಿಂದೇಟು ಹಾಕ್ತಾ ಇದ್ರು.
ಆದ್ರೀಗ ಅದಕ್ಕೂ ಟೈಮ್
ಕೂಡಿ ಬಂದಿತ್ತು. ಮುಹೂರ್ತ
ಮಾಡಿಕೊಂಡ ಸಿನಿಮಾ ಮರುದಿನದಿಂದ್ಲೇ
ಶೂಟಿಂಗ್ ಸಹ ಆರಭಿಸಿದ್ದಾಯ್ತು.
ಅದೆಷ್ಟು ಕಾಳಜಿಯಿಂದ
ಅವ್ನು ಆ ಸಿನಿಮಾ ಮಾಡೋಕೆ ಶುರು
ಮಾಡ್ದ ಅಂದ್ರೆ, ತನ್ನ
ಆರೋಗ್ಯದ ಕಡೆ ಅವ್ನ ಗಮನ ಹರೀಲೇ
ಇಲ್ಲ. ತುಂಬಾ ಉತ್ಸಾಹದಿಂದ
ತನ್ನ ಚಿತ್ರವನ್ನ ಮಾಡಿ ಮುಗಿಸಿದ.
ಚಿತ್ರ ಕಂಪ್ಲೀಟ್ ಆಗಿ
ರಿಲೀಸ್ ಆಗೋಕೆ ಸರಿಯಾಗಿ 2
ವರ್ಷ ಹಿಡೀತು. ಇವತ್ತು
ಅವ್ನ ಸಿನಿಮಾ ರಿಲೀಸ್ ಆಗ್ತಾ
ಇದೆ.
ಆದ್ರೆ ಕಳೆದ
ಒಂದು ತಿಂಗಳಿನಿಂದ ಅವ್ನು
ಆಸ್ಪತ್ರೆಯಲ್ಲಿದ್ದಾನೆ.
ಚಿತ್ರದ ಶೂಟಿಂಗ್ ಎಲ್ಲಾ
ಮುಗಿದು, ಪೋಸ್ಟ್
ಪ್ರೊಡಕ್ಷನ್ ವರ್ಕ್ ಕೂಡ ಆಲ್ಮೋಸ್ಟ್
ಕಂಪ್ಲೀಟ್ ಆಗಿತ್ತು. ಆಗ
ಇದ್ದಕ್ಕಿದ್ದಂತೆ ಒಂದ್ ದಿನ,
ಅವ್ನಿಗೆ ಸಿಕ್ಕಾಪಟ್ಟೆ
ವೀಕ್ನೆಸ್. ಹೋಗಿ
ಡಾಕ್ಟ್ರಿಗೆ ತೋರಿಸಿದ್ರೆ,
ಕೂಡ್ಲೆ ಅಡ್ಮಿಟ್ ಆಗೋಕೆ
ಹೇಳಿದ್ರು. ಅವ್ನಿಗೆ
ಅರ್ಥ ಆಗಿತ್ತು. ಇನ್ನು
ತನ್ನ ಹತ್ರ ಹೆಚ್ಚು ಟೈಮ್ ಇಲ್ಲ
ಅಂತ. ಆದ್ರೇನ್ ಮಾಡೋದು,
ನಡೆದಾಡುವಷ್ಟು ಶಕ್ತಿ
ಕೂಡ ಅವ್ನಿಗೆ ಇರ್ಲಿಲ್ಲ.
ಮಾರನೇ ದಿನ ತನ್ನ ಅಸಿಸ್ಟೆಂಟ್
ಒಬ್ಬನನ್ನ ಕರೆಸಿ, ಚಿತ್ರದ
ಬಾಕಿ ಇದ್ದ ಕೆಲಸ ಮುಗಿಸುವಂತೆ
ಹೇಳಿದ. ಅದೆಲ್ಲಾ
ಆಗಿ, ಇವತ್ತು ರಿಲೀಸ್
ಕೂಡ ಆಯ್ತು. ಆಗ ಅವ್ಳು
ಅವ್ನಿಗೆ ಫೋನ್ ಮಾಡಿದ್ಳು.
ತನ್ನ ಮೊದಲ ಚಿತ್ರದ ಮೊದಲ
ದೃಶ್ಯಕ್ಕೆ ಜನರ ರಸ್ಪಾನ್ಸ್
ಹೇಗಿದೆ ಅನ್ನೋದನ್ನ ಕೇಳಲಿ ಅಂತ.
ಆದ್ರೆ, ಆ
ಕಡೆಯಿಂದ ಯಾವುದೇ ರೆಸ್ಪಾನ್ಸ್
ಬರಲಿಲ್ಲ. ಅವ್ಳಿಗೆ
ಟೆನ್ಷನ್. ಆದ್ರೂ,
ಸಿನಿಮಾನಾ ನೋಡ್ತಾ
ಕೂತಿದ್ಳು. ಸಿನಿಮಾ
ನೋಡ್ತಾ ಹೋದಂಗೆ ಅವ್ಳಿಗೆ ಅದ್ಯಾಕೋ
ಅವಳದೇ ಕಥೆ ಅನಿಸ್ತಾ ಹೋಯ್ತು.
ಆದ್ರೆ ಸಿನಿಮಾ ಮುಂದುವರೀತಿದ್ದ
ಹಾಗೆ ಅವ್ಳಿಗೆ ಅರ್ಥ ಆಗ್ತಾ
ಹೋಯ್ತು. ಇದು ಅವನ
ಕಥೆ ಆದ್ರೆ ಎಲ್ಲಾ ಅವಳ ದೃಷ್ಟಿಕೋನದಲ್ಲಿ.
ಅದ್ರಲ್ಲೂ ಅವ್ಳಿಗೆ
ಗೊತ್ತಿಲ್ಲದ ಅದೆಷ್ಟೋ ಘಟನೆಗಳು.
ಇದೆಲ್ಲಾ ಯಾವಾಗಾಯ್ತು
ಅವ್ಳು ಯೋಚಿಸೋದ್ರಲ್ಲೆ,
ಚಿತ್ರದ ಕ್ಲೈಮಾಕ್ಸ್.
ಅದನ್ನ ನೋಡಿ ಅವ್ಳು
ಕುಸಿದು ಬಿದ್ದಳು. ಚಿತ್ರವೇನೋ
ಸೂಪರ್ ಡೂಪರ್ ಹಿಟ್. ಆದ್ರೆ
ಆ ಚಿತ್ರ ಬಿಡುಗಡೆಯಾದ ಕ್ಷಣವೇ
ಅವನ ಕೊನೆ ಕ್ಷಣವಾಗಿತ್ತು.
ಚಿತ್ರದ ಕ್ಲೈಮಾಕ್ಸ್
ಅವ್ಳ ಜೀವನ ಯಾನದ ಅಂತಿಮ ಘಟ್ಟ.
ನವೀ...